Index   ವಚನ - 74    Search  
 
ಮತ್ಸ್ಯ ತಲೆಸುತ್ತಾಗಿ ಅಚ್ಚರಿಯ ಮುಡಿಯಲ್ಲದೆ. ಕೂರ್ಮನ ಕಪಾಲ ಹರನ ಹಾರದ ಮಧ್ಯದಲ್ಲದೆ. ನಿಮ್ಮ ಪರಿಯೆಂಬ ನರಹರಿಯ ಶಿರಪದದೊಳದೆ. ನಿಮ್ಮ ಆದಿವರಹನ ಕೊಂದಂದಿನ ದಾಡೆ ಕೈಯಲ್ಲದೆ. ನಿಮ್ಮ ತ್ರಿವಿಕ್ರಮನ ನಿಟ್ಟೆಲುವು ಖಟ್ವಾಂಗವಾಗಿ ಕೈಯಲ್ಲದೆ. ಕೇಶವನ ಕಣ್ಣು ಸೋಮೇಶ್ವರನ ಪಾದದಲ್ಲದೆ. ನಿಮ್ಮಗ್ಗದ ನಾರಾಯಣನ ಹೆಣನು ರುದ್ರನ ಹೆಗಲಲ್ಲದೆ. ಸಮಸ್ತ ದೇವರ್ಕಳ ಶಿರಂಗಳು ಇತ್ತರದ ಸರಮಾಲೆ ಬಲ್ಲಿದ ನರಹರಿಯ ತೊವಲು. ಕರಿಗಜಾಸುರನ ತೊವಲು ಕರಿಪುಲಿದೊವಲನುಟ್ಟು ಹೊದ್ದ. ಹಾವಿನಾಭರಣದ ತೊಟ್ಟ, ಕಾಮನ ಬೂದಿಯನಿಟ್ಟ. ದೃಷ್ಟರಿಗೆ ದೃಷ್ಟ, ಮಹಾದಿಟ್ಟ, ಅಘಟ್ಟ ಕಟ್ಟುಗ್ರದೇವ, ರಾವು ಭಾಪು ಸೊಡ್ಡಳಾ.