Index   ವಚನ - 83    Search  
 
ವಿಭೂತಿ ರುದ್ರಾಕ್ಷಿ ಲಿಂಗ ಲಾಂಛನಧಾರಿಯ ಕಂಡಡೆ, ತನುಮನ ದಿಟವೆಂಬೆ. ಅಲ್ಲದ ಸಟೆಗಳ, ಲೋಭಿಗಳ ಕಂಡು, ಮತ್ತೆ ಅಲ್ಲಿ ಅಲ್ಲವೆಂಬೆ. ಅಗ್ನಿ ರವಿ ಶಶಿ ನಿನ್ನಕ್ಷಿಯೆಂದಡೆ, ಆನು ಭ್ರಮೆಗೊಂಡೆ. ವಸುಧೆ ನಿನ್ನ ತನುವೆಂದಡೆ, ಕಠಿಣವ ಕಂಡಂತೆಂಬೆ. ಸಾಗರ ನಿನ್ನ ತನುವೆಂದಡೆ, ಹೆಚ್ಚುಕುಂದ ಕಂಡಂತೆಂಬೆ. ವಾಯು ನಿಮ್ಮ ತನುವೆಂದಡೆ, ದಿಕ್ಪಾಲಕರ ಕಂಡಂತೆಂಬೆ. ಗಗನ ನಿಮ್ಮ ತನುವೆಂದಡೆ, ಬಯಲ ಕಂಡಂತೆಂಬೆ. ಆತ್ಮ ನಿಮ್ಮ ತನುವೆಂದಡೆ, ಜನನ ಮರಣವ ಕಂಡಂತೆಂಬೆ. ನ ಚ ಭೂಮಿ ನ ಚ ರವಿ ನ ಚ ತೇಜ ನ ಚ ವಾಯು ನ ಚ ಗಗನಂ ನ ಚ ರವಿ ನ ಚ ಶಶಿ ನ ಚ ಆತ್ಮ ||ಎಂದುದಾಗಿ, ಭಿನ್ನರೂಪುಗಳ ನಿನ್ನ, ನಿಜವೆನ್ನೆ ನನ್ನೆ ಸೊಡ್ಡಳಾ.