Index   ವಚನ - 84    Search  
 
ವಿಷ್ಣು ಪರಿಪೂರ್ಣನಾದಡೆ, ಸೀತೆ ಕೆಟ್ಟಳೆಂದು ಅರಸಲೇಕೊ? ವಿಷ್ಣು ಪರಿಪೂರ್ಣನಾದಡೆ, ವಟಪತ್ರದ ಮೇಲೆ ಕುಳಿತು, ಜಲಪ್ರಳಯದಲ್ಲಿ ಅಡಗಿದನೆಂಬ ಮಾತೇಕೋ? ವಿಷ್ಣುವಿನ ಬಾಣ ಸಮುದ್ರಕಡ್ಡಕಟ್ಟಿಯಾದಡೆ, ಕಪಿ ಕೋಡಗವ ಹಿಡಿತಂದು, ಬೆಟ್ಟಗಟ್ಟಂಗಳ ಹಿಡಿತಂದು, ಸೇತುವೆಯ ಕಟ್ಟಲೇಕೋ? ವಿಷ್ಣು ಪರಿಪೂರ್ಣನಾದಡೆ, ರಾವಣನ ವಧೆಗಂಜಿ, ಧರೆಯ ಮೇಲೆ ಲಿಂಗಪ್ರತಿಷ್ಠೆಗಳ ಮಾಡಿ ಪೂಜಿಸಲೇಕೋ? ಇಂತು ಬ್ರಹ್ಮಾಂಡದೊಳಗೆ ಸಿಕ್ಕಿ. ಸತ್ತುಹುಟ್ಟುತ್ತಿಹ ದೇವತೆಗಳು ಒಬ್ಬರೂ ಪರಿಪೂರ್ಣರಲ್ಲ. ಮಹಾದಾನಿ ಸೊಡ್ಡಳನೊಬ್ಬನೆ ಪರಿಪೂರ್ಣನು.