Index   ವಚನ - 89    Search  
 
ಶಿವನ ಮಹಿಮೆಯ ಘನವನೇನೆಂಬೆನಯ್ಯ! ಉನ್ನತವಾದ ಮಹಾಗಂಗೆಯ ಜಟಾಗ್ರದಲ್ಲಿ ಧರಿಸಿದನು. ಚರಣಕಮಲದ ಹೆಬ್ಬೆರಳಿಂದೌಂಕಲು, ರಾವಣಾಸುರನು ಮೂರ್ಛಿತನಾಗಿ ಬಿದ್ದನು. ಒಂದು ಬಾಣದಿಂದ ತ್ರಿಪುರವನು ಉರುಹಿದನು. ನೊಸಲಕಣ್ಣ ಅಗ್ನಿಯಿಂದ ಮನ್ಮಥನ ದಹಿಸಿದನು. ತ್ರಿಶೂಲದಿಂದ ಅಂಧಕಾಸುರನ ಇರಿದು ಕೊಂದನು. ಅದೆಂತೆಂದಡೆ: ಜಲೌಘಕಲ್ಲೋಲತರಂಗತುಂಗಗಂಗಾವೃತಾ ಯೇನ ಜಟಾಗ್ರಭಾಗೇ ಪಾದಾಂಬುಜಾಂಗುಷ್ಠನಿಪೀಡನೇನ ಪಾತ ಲಂಕಾಧಿಪತಿರ್ವಿಸಂಜ್ಞಾಃ | ಏಕೇನ ದಗ್ಧಂ ತ್ರಿಪುರಂ ರೇಣಕಾಯೋ ಲಲಾಟಾಗ್ನಿಹುತಾಶನೇನ | ಭಿನ್ನೋದಕಃ ಶೂಲವರೇಣ ಏನಕಸ್ತೋ ನ ಸಾರ್ಥಂ ಕುರುತೇ ವಿರೋಧಂ | ಇಂತೆಂದುದಾಗಿ, ಶಿವನೊಡನೆ ವೈರವ ಮಾಡುವವರಾರುಂಟು? ಭಾಪು, ಭಾಪು ನಿನಗೆ ಸರಿಯುಂಟೆ, ದೇವರಾಯ ಸೊಡ್ಡಳಾ?