Index   ವಚನ - 91    Search  
 
ಶಿವಶಿವಾ, ಬೇಡಿಕೊಳ್ಳರೆ, ಅಮೃತಮಥನದಲ್ಲಿ ದೈನ್ಯವ ಮಾಡಿದವರನುಳುಹಿದ ದೇವನ? ಶಿವಶಿವಾ, ಬೇಡಿಕೊಳ್ಳರೆ, ದಕ್ಷಾಧ್ವರದಲ್ಲಿ ದೈನ್ಯವ ಮಾಡಿದವನುಳುಹಿದ ದೇವನ? ಶಿವಶಿವಾ, ಬೇಡಿಕೊಳ್ಳರೆ, ಅಜಹರಿ ಅವತಾರಂಗಳ ಸಂಹಾರ ಮಾಡಿದ ದೇವನ? ಶಿವಶಿವಾ, ಬೇಡಿಕೊಳ್ಳರೆ, ಅಖಿಳಬ್ರಹ್ಮಾಂಡಂಗಳ ಹೆತ್ತ ತಂದೆ, ನಮ್ಮ ಮಹಾದಾನಿ ಸೊಡ್ಡಳದೇವನ?