Index   ವಚನ - 97    Search  
 
ಸುರರೆಲ್ಲಾ ಮೇಣು ಸತ್ಯಕವಪ್ಪ ದ್ವಿಜರು ತಿರಿಯಕ್ಕಾಗಿ ವಿಭೂತಿಯ ಧರಿಸಿ ಇಹವರು, ನಿಷ್ಟಿಯರೆಲ್ಲಾ ಮೇಣು ಪಟ್ಟವರ್ಧನರು. ಬಟ್ಟಿತ್ತಾಗಿಯೆ ಬೊಟ್ಟನಿಟ್ಟು ಇಹವರು, ಸಿದ್ಧಾಯವ ತೆತ್ತು ಬಿತ್ತಿಯೆಂಬ ಒಕ್ಕಲಿಗರಾದವರು. ಅರ್ಧಚಂದ್ರಾಕೃತಿಯ ಗಂಧದವರು ಕೀಳುಜಾತಿಗಳಯ್ಯಾ. ನೀಳಗಂಧದವರೆಂದು ಹೇಳುವದು ಶೈವದೊಳಗಣ ವಿಭೂತಿಯ ಕಲ್ಪ. ಓಂ ತ್ರಿಪುಂಡ್ರಂ ಸುರವಿಪ್ರಾಣಾಂ ವರ್ತುಳಂ ನೃಜವೈಶ್ಯಯೊಃ | ಅರ್ಧಚಂದ್ರಂತು ಶೂದ್ರಾಣಾಂ ಅನ್ಯೇಷಾಮೂಧ್ರ್ವ ಪುಂಡ್ರಕಂ || ಎಂಬ ವಚನವಿಡಿದು, ಬತ್ತಲೆಗೊಂಬ ಮಾತಿನಲ್ಲಿ, ಮೆಚ್ಚ ಸೊಡ್ಡಳ.