ಸಿದ್ದಾರಾಮೇಶ್ವರದೇವರು ಸೊನ್ನಲಾಪುರಕ್ಕೆ
ಬಿಜಯಂ ಮಾಡುವಂದಿಗೆ
ಸಾಸಲ ಸೋಮೇಶ್ವರದೇವರಿಗೆ ನೊಸಲ ಕಣ್ಣು
ನೆತ್ತಿಯಲ್ಲಿ ಅಮೃತ ಬಂದಿತೆಂಬ ಸುದ್ದಿಯಾದೀತು.
ಕಲ್ಲುಕೋಳಿ ಕೂಗಿತೆಂದು ನುಡಿದಾರು
ಪುಲಿಗೆರೆಯ ಸೋಮೇಶ್ವರದೇವರ ಬಲದ ಭಾಗದಲ್ಲಿ
ಅಭಯಹಸ್ತ ತೋರಿತ್ತೆಂದು ನುಡಿದಾರು
ಬಿದುರೆಯ ಪಟ್ಟಣದ ಹೊರಕೇರಿಯಲ್ಲಿ
ಒಬ್ಬ ಶರಣೆಯ ಗರ್ಭದಲ್ಲಿ
ಒಂಬತ್ತು ವರುಷವಿದ್ದೊಬ್ಬ ಪುತ್ರಹುಟ್ಯಾನು
ಆ ಶರಣ ನಿಮ್ಮ ಪಾದವ ಕಂಡಾನು
ನೀವು ಸೊನ್ನಲಾಪುರಕ್ಕೆ ಬರುವಂದಿಗೆ ಕುರಿಗಳೆಲ್ಲಾ
ತಲೆ ಬಿಳಿದು ಮೈಯೆಲ್ಲಾ ಕಪ್ಪಾಗಿ ಹುಟ್ಯಾವು
ಸೊಡ್ಡಾಳ ದೇವರು ಸಾಕ್ಷಿಯಾಗಿ ಚೆನ್ನಯ್ಯಗಳು
ಮರ್ತ್ಯಕ್ಕೆ ಬಂದುದೆ ಕುರುಹು