ಹಿಡಿದು ಬಿಟ್ಟ ಬಳಿಕ ಅಂತಿರಬೇಕಲ್ಲದೆ,
ಇನ್ನು ಹಿಡಿದು ತಪ್ಪಿದ ವಸ್ತುವ ಅರಸಿ ಹಿಡಿಯಲುಂಟೆ?
ಮುನಿದು ಹಾವಿನೊಳಿಟ್ಟು ಒಸೆದು ಆನೆಯನೇರಿಸಿಹೆನೆಂದಡೆ,
ಶಿವಶರಣರ ಮುನಿಸು ತಿಳಿಯದು ನೋಡಾ.
ಒಡೆದ ಮುತ್ತು ನಾಣ್ಯಕ್ಕೆ ಸಲ್ಲದು,
ಒಡೆದ ಹಾಲು ಅಮೃತಕ್ಕೆ ಸಲ್ಲದು.
ನಾವೇತಕಯ್ಯಾ, ನಿನಗಂದು ಸೊಡ್ಡಳನ
ಶರಣರು ನಿರೂಪವ ಕೊಡಲು,
ಎನ್ನ ಪರಮಾರಾಧ್ಯರು
ಸಂಗನಬಸವಣ್ಣನ ತಿಳುಹುತಿರ್ದರು.
Art
Manuscript
Music
Courtesy:
Transliteration
Hiḍidu biṭṭa baḷika antirabēkallade,
innu hiḍidu tappida vastuva arasi hiḍiyaluṇṭe?
Munidu hāvinoḷiṭṭu osedu āneyanērisihenendaḍe,
śivaśaraṇara munisu tiḷiyadu nōḍā.
Oḍeda muttu nāṇyakke salladu,
oḍeda hālu amr̥takke salladu.
Nāvētakayyā, ninagandu soḍḍaḷana
śaraṇaru nirūpava koḍalu,
enna paramārādhyaru
saṅganabasavaṇṇana tiḷuhutirdaru.