ಶೂನ್ಯ ಮಹಾಶೂನ್ಯವಿಲ್ಲದಲ್ಲಿಂದತ್ತತ್ತ,
ನಾದ ಬಿಂದು ಕಳೆಗಳಿಲ್ಲದಲ್ಲಿಂದತ್ತತ್ತ,
ಸದಾಶಿವ ಈಶ್ವರ ವಿದ್ಯೇಶ್ವರರೆಂಬ ಗಣೇಶ್ವರರಿಲ್ಲದಲ್ಲಿಂದತ್ತತ್ತ,
ಗಂಗೆವಾಳುಕ ಸಮಾರುದ್ರರುಗಳಿಲ್ಲದಲ್ಲಿಂದತ್ತತ್ತ,
ಬ್ರಹ್ಮ ವಿಷ್ಣು ಇಂದ್ರಾದಿ ದಿಕ್ಪಾಲಕರಿಲ್ಲದಲ್ಲಿಂದತ್ತತ್ತ,
ಕಾಲ ಕರ್ಮ ಪ್ರಳಯಂಗಳಿಲ್ಲದಲ್ಲಿಂದತ್ತತ್ತ,
ಮುನ್ನ ನಿಮ್ಮ ನಿಜದಲ್ಲಿ ನೀವೇ ಇರ್ದಿರಯ್ಯ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.