Index   ವಚನ - 2    Search  
 
ಅಯ್ಯಾ ಏನೂ ಏನೂ ಇಲ್ಲದಂದು, ಆದಿಕುಳದುತ್ಪತ್ಯವಾಗದಂದು, ಚಂದ್ರಧರ ವೃಷಭವಾಹನರಿಲ್ಲದಂದು, ಕಾಲಸಂಹರ ತ್ರಿಪುರಸಂಹರರಿಲ್ಲದಂದು, ಕಾಮನ ಭಸ್ಮವ ಪೂಸದಂದು ದೇವಿಯರಿಬ್ಬರಿಲ್ಲದಂದು, ಹರಿಯ ಹತ್ತವತಾರದಲ್ಲಿ ತಾರದಂದು, ಬ್ರಹ್ಮನ ಶಿರವ ಹರಿಯದಂದು, ಇವಾವ ಲೀಲೆಯದೋರದಂದು, ನಿಮಗನಂತ ನಾಮಂಗಳಿಲ್ಲದಂದು, ಅಂದು ನಿಮ್ಮ ಹೆಸರೇನು? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ?