Index   ವಚನ - 13    Search  
 
ಬಳ್ಳಿಯಲಡಗಿ ಕೋಟರದಲ್ಲಿ ತೋರುವ ತಾವರೆಯ ಬೀಜದಂತೆ, ನೀನು ಎನ್ನಂತರಂಗದಲ್ಲಡಗಿರ್ದ ಕಾರಣ, ಅಲ್ಲೆ ತೋರುವೆ ಎಲೆ ಅಯ್ಯ. ರನ್ನದ ಕಾಂತಿಯಂತೆ, ಎನ್ನೊಳಗಡಗಿರ್ದು ಮೈದೋರದ ಭೇದವ, ನಿಮ್ಮಲ್ಲಿ ಕಂಡೆನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.