Index   ವಚನ - 25    Search  
 
ಅರಿದಿಹೆನೆಂಬ ಅವಸ್ಥೆಯಿದ್ದಡೇನು? ಮತ್ತೆ ಮರವೆಗೆ ಕಾರಣವಾದ ಸಂಸಾರದ ಕಾಯ ಕಳವಳಕ್ಕೊಳಗಾದಡೆ ಮಾಯೆ ಮನವನೆಡೆಗೊಂಡಿತ್ತು. ಮಾಯೆ ಮನವನೆಡೆಗೊಂಡಲ್ಲಿ ಅರಿವು ಜಾರಿತ್ತು. ಮರಹು ಘನವಾಯಿತ್ತು. ಅರಿವುದಿನ್ನೇನು ಹೇಳಾ?. ಕೈಯ ತುತ್ತು ಬಾಯ್ಗೆ ಬಾರದಂತಾಯ್ತು. ಇನ್ನೆಲ್ಲಿಯದು ಲಿಂಗ? ಇನ್ನೆಲ್ಲಿಯದು ಜಂಗಮ? ಇನ್ನೆಲ್ಲಿಯದು ಪ್ರಸಾದ? ಅಕಟಕಟಾ ಹಾನಿಯ ಹಿಡಿದು ಹೀನವಾದರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.