ಹಲವು ಕಾಲದಿಂದಗಿದಗಿದು ತಿಂದು, ಸವಿಗಲಿತ
ಮಾಯಾರಕ್ಕಸಿ ಬಿಡೆಂದರೆ ಬಿಡುವಳೆ?
ಇವಳ ಬಾಧೆಯ ಗೆಲಿವರೊಂದುಪಾಯವ
ಕಾಬುದು ಕಾಣಿರಯ್ಯ.
ಎಲ್ಲ ದೇವರಿಗೆ ಬಲ್ಲಿದ ಪರಶಿವನ ಮರೆಯ ಹೊಕ್ಕು
ಇವಳ ಬಾಯ ಟೊಣೆವುದಯ್ಯ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಬೆರಸಬೇಕಾದಡೆ.
Art
Manuscript
Music
Courtesy:
Transliteration
Halavu kāladindagidagidu tindu, savigalita
māyārakkasi biḍendare biḍuvaḷe?
Ivaḷa bādheya gelivarondupāyava
kābudu kāṇirayya.
Ella dēvarige ballida paraśivana mareya hokku
ivaḷa bāya ṭoṇevudayya,
nijaguru svatantrasid'dhaliṅgēśvarana berasabēkādaḍe.