Index   ವಚನ - 38    Search  
 
ಏನ ಮಾಡುವೆನಯ್ಯ? ಈ ಮನವೆಂಬ ಮರ್ಕಟನ ಸಂಗದಿಂದ, ಮರ್ಕಟವಿಧಿಯಾಯಿತ್ತಯ್ಯ. ತನುವೆಂಬ ವೃಕ್ಷದಲ್ಲಿ ಇಂದ್ರಿಯಂಗಳೆಂಬ ಶಾಖೋಪಶಾಖೆಗಳಿಗೆ ಲಂಘಿಸುತ್ತಿದೆ ನೋಡಯ್ಯ. ಸಜ್ಜನರಿಗೆ ದುರ್ಜನರ ಸಂಗದಿಂದ ದುರ್ಜನಿಕೆ ಬಂದಂತಾಯಿತ್ತಯ್ಯ. ಈ ಮನದ ಮರ್ಕಟತನವ ಮಾಣಿಸಿ ನಿಮ್ಮಲ್ಲಿ ಕಟ್ಟಿ ಬಂಧವಾಗಿರಿಸೀ ಮನವ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.