Index   ವಚನ - 41    Search  
 
ಹೇಡಿಮನದ ಸಖತ್ವದಿಂದೇನಾಗದಯ್ಯ? ಇಹಪರದ ವೈರಾಗ್ಯವ ಕೆಡಿಸಿ ಹೇಡಿಗೊಳಿಸಿತ್ತು. ಮುಂದಕ್ಕೊಂದಡಿಯಿಡಲೀಯದೆ ಹಿಂದಕ್ಕೆ ಹಿಡಿದೆಳೆವುತ್ತಿದೆ. ಈ ಮನಕ್ಕೆ ಜ್ಞಾನಶಸ್ತ್ರವ ಕೊಟ್ಟು ಕಲಿಮಾಡಿ ಸನ್ನಿಧಿಯಲ್ಲಿ ನಿಮ್ಮಾಳಾಗಿರಿಸಿಕೊಳ್ಳಯ್ಯಾ ಈ ಮನವನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.