Index   ವಚನ - 42    Search  
 
ಕತ್ತಲೆಯ ಮನೆಯ ಹೊಕ್ಕು ತೊಳಲುವ ವ್ಯರ್ಥ ಜೀವರನೇನೆಂಬೆ ನೋಡಾ. ಅರ್ತಿಕಾರಿಕೆಗೆ ಬಲುಗುಂಡ ಹೊತ್ತು ಬಳಲುವಂತೆ ಬಳಲುತೈದಾರೆ ನೋಡಾ. ಶಿವಜ್ಞಾನವಿಲ್ಲದೆ ದೇಹಭಾರವ ಹೊತ್ತು ಗತಿಗೆಡುತೈದಾರೆ. ಮುನ್ನ ಮಾಡಿದ ಕರ್ಮ ಬೆನ್ನಲ್ಲಿ ಮನೆಯ ಹೊರುವಂತಾಯಿತ್ತು. ಇನ್ನಾದರೂ ಅರಿದು ನಡೆಯಲು, ಬೆನ್ನ ಹತ್ತಿದ ಮನೆಯ ತೊ[ಲ]ಗೆ ನೂಂಕಿ ತನ್ನತ್ತ ತೆಗೆದುಕೊಂಬನು ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.