Index   ವಚನ - 43    Search  
 
ಬಡಕಲ ಪಶುವಿಂಗೆ ಬಲುದಂಡಿಯ ಕಟ್ಟಿದರೆ ಎಳೆದೆಳೆದು ಸಾವಂತೆ,ಸಾವುತ್ತಿದೆ ನೋಡಾ. ಅಜ್ಞಾನ ಜಡಜೀವರು ದೇಹವೆಂಬ ದಂಡಿಯ ಕಟ್ಟಿಸಿಕೊಂಡು, ಬಿಡಲುಪಾಯುವ ಕಾಣದೆ, ಹೊತ್ತು ತೊಳಲುತ್ತಿದ್ದರಲ್ಲ, ಜನ್ಮಜನ್ಮಾಂತರದಲ್ಲಿ. ಶಿವಭಕ್ತಿಯೆಂಬ ಸಜ್ಜನಿಕೆ ಬಂದರೀದೇಹವೆಂಬ ದಂಡಿಯ ಬಿಡಿಸುವ[ನ]ಯ್ಯಾ, ಕರುಣಿ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.