Index   ವಚನ - 47    Search  
 
ಆಸೆಯೆಂಬ ಸ್ತ್ರೀಗೆ ಮನಸೋತವರೆಲ್ಲಾ ಕೆಟ್ಟ ಕೇಡನೇನೆಂಬೆನಯ್ಯ? ಯತಿಗಳಾಗಲಿ ವೇದಾಧ್ಯಾಯಿಗಳಾಗಲಿ ವ್ರತಿಗಳಾಗಲಿ ಸರ್ವವಿದ್ಯಾಕಲಾವಂತರಾಗಲಿ ನರರೊಳಗಾಗಲಿ ಸುರರೊಳಗಾಗಲಿ ಇವರೆಲ್ಲರ, ಧನವುಳ್ಳವರ ಬಾಗಿಲ ಕಾಯಿಸಿದಳು ನೋಡಾ. ಇವಳಿಗಾರಾರು ಮರುಳಾಗದಿರರು? ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರನ ಶರಣರಲ್ಲದವರ, ಕಿವಿಯ ಹಿ[ಂಡಿ] ಕುಣಿಸಿದಳು ನೋಡಾ.