Index   ವಚನ - 46    Search  
 
ಆಸೆಯೆಂಬ ವೇಶಿ ಆರನಾದರೂ ತನ್ನತ್ತ ಕರೆವಳು. ಈ ಆಸೆಯೆಂಬವಳು ಆರನಾದರೆಯೂ ಘಾಸಿಮಾಡಿ, ತನು ಮನವ ವ್ರಯವ ಮಾಡುವಳು. ಈ ಆಸೆಯೆಂಬ ವೇಶ್ಯೆಗೆ ಒತ್ತೆಯ ಕೊಡದ ನಿರಾಶಿಗಳೆಂಬುವರನಾರನೂ ಕಾಣೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.