ಮರಹೆಂಬುದಾವರಿಸಿದವರಾರಾದಡಾಗಲಿ,
ದೇವ ದಾನವ ಮಾನವರೊಳಗಾದವರಾರಾದರೂ,
ಮಾಡಬಾರದ ಕರ್ಮವ ಮಾಡಿ,
ಬಾರದ ಭವದಲಿ ಬಂದು
ಉಣ್ಣದ ಅಪೇಯವ ಉಂಡು, ಕುಡಿದು
ಕಾಣದ ದುಃಖವ ಕಂಡು
ಸಾಯದ ನಾಯ ಸಾವ ಸತ್ತು ಹೋಹರಿಗೆ ಕಡೆಯಿಲ್ಲ.
ಶಿವ ಶಿವ ಮಹಾದೇವ,
ನೀನು ಮಾಡಿದ ಬಿನ್ನಾಣದ ಮರವೆಯ ಕಂಡು
ನಾನು ಬೆರಗಾದೆನು ಕಾಣಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.