Index   ವಚನ - 61    Search  
 
ಶ್ರೀಗುರುಕರುಣವ ಪಡೆಯಲೆಂದು ಹೋದಡೆ, ಗುರುವೆನ್ನ ಕಾಯವ ಶುದ್ಧವ ಮಾಡಿ, ಕಾಯದಲ್ಲಿ ಮಂತ್ರವನಿರಿಸಿ, ಮಂತ್ರಕಾಯನ ಮಾಡಿದನು. ಜೀವವ ಶುದ್ಧವ ಮಾಡಿ, ಜೀವದಲ್ಲಿ ಲಿಂಗವನಿರಿಸಿ, ಲಿಂಗಪ್ರಾಣಿಯ ಮಾಡಿದನು. ಶಿವಮಂತ್ರ ವಾಚ್ಯ ವಾಚಕ ಸಂಬಂಧವಾದ ಕಾರಣ, ಕಾಯವೇ ಜ್ಞಾನಕಾಯವಾಯಿತ್ತು, ಜೀವ ಶಿವನಾಯಿತ್ತು. ಇಂತು ಶ್ರೀಗುರುವಿನ ಕಾರುಣ್ಯದಿಂದೆ ನಾನು ಬದುಕಿದೆನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.