ಅಯ್ಯಾ ನಿಮ್ಮ ಶರಣರು ಕರ್ಮಕಾಯರಲ್ಲ,
ಜ್ಞಾನಕಾಯರು ನೋಡಯ್ಯ.
ಅದೇನು ಕಾರಣವೆಂದಡೆ:
ಭಕ್ತಿಕಾರಣ ಅವತರಿಸಿದರಾಗಿ.
`ಭಕ್ತಕಾಯ ಮಮಕಾಯ' ವೆಂದುದು ಗುರುವಚನ.
ದೇವಗೂ ಭಕ್ತಗೂ ಕಾಯ ಒಂದಾದ ಕಾರಣ,
ಕರ್ಮರಹಿತರು ನಿಮ್ಮ ಶರಣರು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.
Art
Manuscript
Music
Courtesy:
Transliteration
Ayyā nim'ma śaraṇaru karmakāyaralla,
jñānakāyaru nōḍayya.
Adēnu kāraṇavendaḍe:
Bhaktikāraṇa avatarisidarāgi.
`Bhaktakāya mamakāya' vendudu guruvacana.
Dēvagū bhaktagū kāya ondāda kāraṇa,
karmarahitaru nim'ma śaraṇaru,
nijaguru svatantrasid'dhaliṅgēśvara.