ಶ್ರೀಗುರು ಕರುಣಿಸಿ, ಅಂಗದ ಮೇಲೆ
ಲಿಂಗವ ಧರಿಸಿದ ಕಾರಣ,
ಸರ್ವಾಂಗವು ಲಿಂಗವಾಯಿತ್ತು.
ಅದೆಂತೆಂದಡೆ:
ಅಗ್ನಿಯಿಂದ ತಪ್ತವಾದ ಲೋಹದ ಪುತ್ಥಳಿಯಂತೆ,
ಒಳಗೂ ಹೊರಗೂ ಏಕವಾಗಿ ಲಿಂಗವೆ ಬೆಳಗುತಿರ್ದ ಕಾರಣ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ,
ನಿಮ್ಮಶರಣ ಸರ್ವಾಂಗಲಿಂಗಿಯಾದನು.
Art
Manuscript
Music
Courtesy:
Transliteration
Śrīguru karuṇisi, aṅgada mēle
liṅgava dharisida kāraṇa,
sarvāṅgavu liṅgavāyittu.
Adentendaḍe:
Agniyinda taptavāda lōhada put'thaḷiyante,
oḷagū horagū ēkavāgi liṅgave beḷagutirda kāraṇa.
Nijaguru svatantrasid'dhaliṅgēśvara,
nim'maśaraṇa sarvāṅgaliṅgiyādanu.