Index   ವಚನ - 76    Search  
 
ಅಯ್ಯಾ ಜಡೆಯೆಡೆಯಲ್ಲಿ ಗಂಗೆಯನೇಕೆ ಧರಿಸಿದೆ? ಕೆಲದಲ್ಲಿ ಚಂದ್ರಕಲೆಯನೇಕೆ ಸೂಡಿದೆ? ತ್ರಿಶೂಲ ಡಮರುಗವನೇಕೆ ಹಿಡಿದೆ? ವೃಷಭವಾಹನವೇಕೆ ಹೇಳ? ಉಮೆಯ ತೊಡೆಯ ಮೇಲೇಕೇರಿಸಿದೆ? ನಡು ನೊಸಲಲ್ಲಿ ಕಿಡಿಗಣ್ಣನೇಕೆ ತಾಳಿದೆ? ವರದಾಭಯ ಹಸ್ತದಿಂದ ಮೃಡನೆಂಬ ಹೆಸರು ಬಂದಿತೆಂದು, ನಿನ್ನ ಬೆಡಗಿನ ಲೀಲೆಯ ಕಂಡು, ಭಕ್ತಿ ಕಂಪಿತನೆಂದರಿದೆನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.