Index   ವಚನ - 75    Search  
 
ಅಯ್ಯಾ ನಿಮ್ಮ ಶರಣರು ಕರ್ಮಕಾಯರಲ್ಲ, ಜ್ಞಾನಕಾಯರು ನೋಡಯ್ಯ. ಅದೇನು ಕಾರಣವೆಂದಡೆ: ಭಕ್ತಿಕಾರಣ ಅವತರಿಸಿದರಾಗಿ. `ಭಕ್ತಕಾಯ ಮಮಕಾಯ' ವೆಂದುದು ಗುರುವಚನ. ದೇವಗೂ ಭಕ್ತಗೂ ಕಾಯ ಒಂದಾದ ಕಾರಣ, ಕರ್ಮರಹಿತರು ನಿಮ್ಮ ಶರಣರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.