ಮೂರ್ಖನಾಗಲಿ, ಪಂಡಿತನಾಗಲಿ,
ಬ್ರಹ್ಮಚಾರಿಯಾಗಲಿ, ಗೃಹಸ್ಥನಾಗಲಿ,
ವಾನಪ್ರಸ್ಥನಾಗಲಿ, ಯತಿಯಾಗಲಿ,
ಶ್ರೀ ವಿಭೂತಿಯನೊಲಿದು ಧರಿಸಿದಾತನೆ ಧನ್ಯನು.
ಆತನೇ ಸರ್ವಾಪತ್ತುಗಳ ತೊಲಗ ನೂಂಕಿ,
ಸಮಸ್ತ ಪಾತಕೋಪಪಾತಕಂಗಳು ತೊಲಗಿ,
ಶುದ್ಧಾತ್ಮನಹನಯ್ಯ.
"ತ್ರಿಪುಂಡ್ರಂ ಭಸ್ಮನಾ ಕರೋತಿ ಯೋ ವಿದ್ವಾನ್
ಬ್ರಹ್ಮಚಾರೀ ಗೃಹಸ್ಥೋ ವಾನಪ್ರಸ್ಥೋ ವಿದ್ವಾನ್
ಬ್ರಹ್ಮಚಾರೀ ಗೃಹಸ್ಥೋ ವಾನಪ್ರಸ್ಥೋ ಯತಿರ್ವಾ
ಸಮಸ್ತಪಾತಕೋಪಾತಕೇಭ್ಯಃ ಪೂತೋ ಭವತಿ"
ಎಂದು ಶ್ರುತಿ ಸಾರುತ್ತಿರೆ
ಇಂತಪ್ಪ ಶ್ರೀ ವಿಭೂತಿಯನರಿದು ಧರಿಸಿ,
ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಕೂಡಿರಣ್ಣಾ.
Art
Manuscript
Music
Courtesy:
Transliteration
Mūrkhanāgali, paṇḍitanāgali,
brahmacāriyāgali, gr̥hasthanāgali,
vānaprasthanāgali, yatiyāgali,
śrī vibhūtiyanolidu dharisidātane dhan'yanu.
Ātanē sarvāpattugaḷa tolaga nūṅki,
samasta pātakōpapātakaṅgaḷu tolagi,
śud'dhātmanahanayya.
Tripuṇḍraṁ bhasmanā karōti yō vidvān
brahmacārī gr̥hasthō vānaprasthō vidvān
brahmacārī gr̥hasthō vānaprasthō yatirvā
samastapātakō pātakēbhyaḥ pūtō bhavati
endu śruti sāruttire
intappa śrī vibhūtiyanaridu dharisi,
nam'ma nijaguru svatantrasid'dhaliṅgēśvarana kūḍiraṇṇā.