Index   ವಚನ - 90    Search  
 
ಸದಾಚಾರವನಾಚರಿಸುವ ಸತ್ಕ್ರೀಯಾಚಾರ ಸಂಪನ್ನಂಗೆ, ಸಮ್ಯಗ್‍ಜ್ಞಾನ ಉದಯವಹುದು. ಆ ಸಮ್ಯಗ್‍ಜ್ಞಾನೋದಯದಿಂದ, ತನ್ನ ತಾನರಿದು, ತಾನೆ ಶಿವನಲ್ಲದೆ, ಸ್ವತಂತ್ರಸಿದ್ಧಲಿಂಗೇಶ್ವರನ ನಿಜವನೆಯ್ದುವಡೆ, ಸದಾಚಾರವೇ ಮುಖ್ಯವಯ್ಯ.