Index   ವಚನ - 91    Search  
 
ಜ್ಞಾನವಿಲ್ಲದವಂಗೆ ಆಚಾರವಿಲ್ಲ. ಆಚಾರವಿಲ್ಲದವಂಗೆ ಭಕ್ತಿಯಲ್ಲ. ಭಕ್ತಿಯಿಲ್ಲದವಂಗೆ ವಿರಕ್ತಿಯಿಲ್ಲ. ವಿರಕ್ತಿಯಿಲ್ಲದವಂಗೆ ಮುಕ್ತಿಯಿಲ್ಲ. ಇದು ಕಾರಣ, ಜ್ಞಾನ ವಿಚಾರ ಭಕ್ತಿ ವಿರಕ್ತಿ ಉಳ್ಳವಂಗೆ ಮುಕ್ತಿಯುಂಟು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.