Index   ವಚನ - 94    Search  
 
ಭಕ್ತಿಯ ಭಾವನಿಷ್ಠೆ ನಿಬ್ಬೆರಸಲಾಗಿ ಶಿವನ ತನ್ನ ವಶವ ಮಾಡಿತ್ತು ಭಕ್ತಿ. ಶಿವನ ನಡೆಸಿತ್ತು ಭಕ್ತಿ. ನುಡಿಸಿತ್ತು ಭಕ್ತಿ. ಶಿವನನುಣಿಸಿ ಊಡಿಸಿ ತೊಡಿಸಿತ್ತು ಭಕ್ತಿ. ಶಿವನ ಹಾಡಿಸಿ, ಕುಣಿದಾಡಿಸಿತ್ತು ಭಕ್ತಿ. ಇಂತಲ್ಲದೆ ವಿರಕ್ತಿಯಿಲ್ಲ. ಜ್ಞಾನವಿಲ್ಲ. ಇದು ಕಾರಣ, ಭಕ್ತಿಯೇ ಮುಕ್ತಿಯ ಜನನಿ, ತಾನೆ ಬೇರಿಲ್ಲ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಜವನೆಯ್ದುವಡೆ, ಭಕ್ತಿಯಿಂದಲ್ಲದಾಗದು.