Index   ವಚನ - 96    Search  
 
ಗುರುವ ನಿಂದಿಸಿದವನು ಲಿಂಗವ ನಿಂದಿಸಿದವ. ಲಿಂಗವ ನಿಂದಿಸಿದವನು ಜಂಗಮವ ನಿಂದಿಸಿದವ. ಜಂಗಮವ ನಿಂದಿಸಿದವನು ಲಿಂಗವ ನಿಂದಿಸಿದವ. ಗುರುವ ನಿಂದಿಸಿದವನು ಜಂಗಮವ ನಿಂದಿಸಿದವ. ಜಂಗಮವ ನಿಂದಿಸಿದವನು ಲಿಂಗವ ನಿಂದಿಸಿದವ. ಗುರುವ ನಿಂದಿಸಿದವ. ಪರವಸ್ತುವೊಂದೇ ಗುರು ಲಿಂಗ ಜಂಗಮವೆಂಬ ನಾಮ ಪಡೆಯಿತ್ತೆಂದಡೆ ಬೇರಾಗಬಲ್ಲುದೆ? ಈ ಮರ್ಮವನರಿಯದವಂಗೆ ಗುರು ಲಿಂಗ ಜಂಗಮವಿಲ್ಲವಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.