Index   ವಚನ - 103    Search  
 
ಗುರುವೆಂದರಿಯರು, ಲಿಂಗವೆಂದರಿಯರು, ಜಂಗಮವೆಂದರಿಯರು. ಹಿಂದೊಂದನಾಡುವರು, ಮುಂದೊಂದನಾಡುವರು. ಮತ್ತೆ, ನಂಬದೆ, ಭಕ್ತರಂತೆ, ಪಾದೋದಕ ಪ್ರಸಾದಕ್ಕೆ ಕೈಯ್ಯನಾನುವರು. ಈಶ ವೇಷವ ತೊಟ್ಟ, ವೇಷಧಾರಕರು, ತಾವೆ, ಭಕ್ತರೆಂಬರು. ಇವರು, ಮಾಯಾಪಾಶದಲ್ಲಿ, ಘಾಸಿಯಾಗದೆ ಮಾಣ್ಬರೇ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನನರಿಯದ ಜಾತ್ಯಂಧಕರು.