Index   ವಚನ - 110    Search  
 
ಆರಾದರು ಆಗಲಿ, ತಮ್ಮ ಕುಲ ಗೋತ್ರ ಜಾತಿ ಧರ್ಮ ಆಚಾರ ತಪ್ಪಿನಡೆದಡೆ, ಅವರು ಅನಾಚಾರಿಗಳೆಂದು ಮುಖವ ನೋಡಲೊಲ್ಲರು ನೋಡಾ. ಇವರಿಂದಾ ಕಡೆಯೆ ಶಿವಭಕ್ತರಾದವರು? ಭಕ್ತರಿಗೆ ನಡೆ ನುಡಿ ಸತ್ಯ ಶುದ್ಧ ಆಚಾರವಿರಬೇಕು. ಅಂತಲ್ಲದೆ: ಆಚಾರ ತಪ್ಪಿ ನಡೆದಡೆ, ನೀ ಮೆಚ್ಚೆಯೆಂದು ಅತಿಗಳೆವೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.