Index   ವಚನ - 111    Search  
 
ಕಾಡೊಳಗಣ ಹುಲುಗಿಣಿಯ ಹಿಡಿತಂದು, ಓಂ ನಮಃಶಿವಾಯ, ಹರಹರ ಶಿವಶಿವ ಎಂದು ಓದಿಸಿದಡೆ ಓದದೆ? ನಿಚ್ಚ ನಿಚ್ಚ ನರಾರಣ್ಯದೊಳಗಿದ್ದ ಮನುಷ್ಯರ ಹಿಡಿತಂದು, ಹಿರಿದು ಪರಿಯಲ್ಲಿ ಉಪದೇಶವ ಮಾಡಿ, ಶಿವಮಂತ್ರೋಪದೇಶವ ಹೇಳಿದಡೆ, ಅದ ಮರೆದು, ಕಾಳ್ನುಡಿಯ ನುಡಿವವರು, ಹುಲುಗಿಣಿಯಿಂದ ಕಷ್ಟ ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.