Index   ವಚನ - 120    Search  
 
ಶಿವಕಥನಂಗಳ ಕೇಳಿ ಕೇಳಿ ಸಂತೋಷಿಸಿ, ಶಿವಕೀರ್ತನೆಗಳ ಮಾಡಿ ಮಾಡಿ, ದಣಿವಿಲ್ಲದೆ ಶಿವನ ನೆನೆನೆನೆದು, ಶಿವಸೇವೆಯ ಮಾಡುತ್ತ, ಶಿವಪೂಜೆಯನೋಜೆಯಲ್ಲಿ ವಿಸ್ತರಿಸಿ, ಶಿವಶರಣೆಂದು ಶಿವನೊಡವೆಯ ಶಿವನವರಿಗರ್ಪಿಸಿ, ಶಿವನೆ ತಾನಾದ, ಭವರಹಿತ ಭಕ್ತನ ನೋಡಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.