Index   ವಚನ - 121    Search  
 
ಅಂಗೈಯ ಲಿಂಗದಲ್ಲಿ ಕಂಗಳು ನಟ್ಟು, ಎವೆಹಳಚದೆ, ಮನ ಕವಲಿಡದೆ, ಚಿತ್ರದ ರೂಹಿನ ತೆರನಂತೆ, ಲಿಂಗವ ನೋಡಿ ನೋಡಿ, ಕಂಗಳಲಚ್ಚೊತ್ತಿ, ಮನದಲ್ಲಿ ನೆನೆನೆನೆದು ನೆರೆವ ಲಿಂಗಸುಖ ಸಂಪನ್ನರನೆ, ಲಿಂಗವೆಂಬೆನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.