Index   ವಚನ - 122    Search  
 
ಹೊತ್ತುಳ್ಳಲ್ಲಿ ಅಗ್ಘವಣಿ ಪತ್ರೆ ಪುಷ್ಪವ ತಂದು, ಅರ್ಥಿಯಲ್ಲಿ ಶಿವಲಿಂಗಪೂಜೆಯ ಮಾಡಲು, ಎತ್ತಿದ ಮಣಿಮಕುಟದ ಮೊತ್ತದ ಗಣಂಗಳ ನಡುವೆ, ಮೃತ್ಯುಂಜಯನೊಯ್ದಿರಿಸುವನವರ, ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.