Index   ವಚನ - 142    Search  
 
ಶಿವಭಕ್ತಿಯುಳ್ಳವರಿಗೆ, ಪುಣ್ಯವಿಲ್ಲ. ಪಾಪವಿಲ್ಲ. ಸ್ವರ್ಗವಿಲ್ಲ. ನರಕವಿಲ್ಲ. ಅದೆಂತೆಂದಡೆ, ಚಂಡೇಶ ಶಿವಭಕ್ತ ತಂದೆಯ ಕೊಂದರೆ ಬಂದಿತ್ತೆ ಪಾಪ, ಎಯ್ದಿದನೆ ನರಕ? ಇಲ್ಲವಾಗಿ. ಚಂಡೇಶ ಸಿದ್ಧರಾಮ[ರಿ]ಗೊಲಿದು, ಶಿವ ತನ್ನೊಳಗಿರಿಸನೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು?