Index   ವಚನ - 143    Search  
 
ಬಿಸಜತಂತುವಿನ ಶೃಂಖಲದಿಂದ, ಮದಗಜ ಬಂಧವಡೆಯಬಲ್ಲುದೆ? ತರಗೆಲೆ ಮುಸುಕಿದಡೆ, ದಾವಾನಲ ಕೆಡಬಲ್ಲುದೆ? ಮಂಜಿನ ಪೌಜು ಸೂರ್ಯನ ಮುತ್ತಬಲ್ಲುದೆ? ನಿಮ್ಮನರಿದಾತಂಗೆ, ಪುಣ್ಯ ಪಾಪ ಕರ್ಮ ಲೇಪಿಸಬಲ್ಲವೆ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.