Index   ವಚನ - 145    Search  
 
ಆದಿಬಿಂದು ಬೀಜವನರಿದು, ಬಿಂದೋಪರಿ ಅನಾಹತನಾದವನರಿದು, ಆ ಪ್ರಣವ ಸೂತ್ರವಿಡಿದು ಶಿವಧ್ಯಾನವ ಮಾಡಲು, ಆ ಧ್ಯಾನಾಗ್ನಿಯಿಂದ, ಯೋಜನಾಂತರ ಶೈಲ ಸಮಾನಪಾಪ, ಬೆಂದು ಹೋಹುದು ನೋಡಯ್ಯ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ, ನಿಜಪದವಿಯನೈದುವುದು ಬಳಿಕ ನೋಡಯ್ಯ.