Index   ವಚನ - 146    Search  
 
ತಪ ಸತ್ಕ್ರೀ ಜಪ ಧ್ಯಾನ ಜ್ಞಾನಂಗಳಿಂದ ಮಾಡುವ ಭಕ್ತಿಗೆ ಶಿವನೊಲಿವ. ಶಿವಶರಣರೊಲಿವರಯ್ಯ. ಹಿಂದೆ ಭವನಾಶ, ಮುಂದೆ ಕೈವಲ್ಯವಯ್ಯ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.