Index   ವಚನ - 147    Search  
 
ಜ್ಞಾತೃ, ಜ್ಞಾನ ಜ್ಞೇಯವೆಂಬ ತ್ರಿವಿಧದ ಭೇದವನರಿದು, ಪದ ಮಂತ್ರ ವಾಕ್ಯ ಪಿಂಡಸ್ವಾತ್ಮ ಚಿಂತನರೂಪ ಸರ್ವ ಚಿದ್ರೂಪ ರೂಪಾತೀತ ನಿರಂಜನ ಧ್ಯಾನ ಚತುರ್ವಿಧವನರಿದೊಂದುಮಾಡೆ, ಜ್ಞಾತೃ, ಜ್ಞಾನದೊಳಗಡಗಿ, ಜ್ಞಾನ, ಜ್ಞೇಯದೊಳಗಡಗಿ, ಜ್ಞೇಯವು ತನ್ನಲ್ಲಿ ತಾನೇ ವಿಶ್ರಮಿಸಿ ನಿಂದಿತ್ತಯ್ಯ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.