ಜ್ಞಾತೃ, ಜ್ಞಾನ ಜ್ಞೇಯವೆಂಬ ತ್ರಿವಿಧದ ಭೇದವನರಿದು,
ಪದ ಮಂತ್ರ ವಾಕ್ಯ ಪಿಂಡಸ್ವಾತ್ಮ ಚಿಂತನರೂಪ
ಸರ್ವ ಚಿದ್ರೂಪ ರೂಪಾತೀತ ನಿರಂಜನ ಧ್ಯಾನ
ಚತುರ್ವಿಧವನರಿದೊಂದುಮಾಡೆ,
ಜ್ಞಾತೃ, ಜ್ಞಾನದೊಳಗಡಗಿ, ಜ್ಞಾನ, ಜ್ಞೇಯದೊಳಗಡಗಿ,
ಜ್ಞೇಯವು ತನ್ನಲ್ಲಿ ತಾನೇ ವಿಶ್ರಮಿಸಿ ನಿಂದಿತ್ತಯ್ಯ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.
Art
Manuscript
Music
Courtesy:
Transliteration
Jñātr̥, jñāna jñēyavemba trividhada bhēdavanaridu,
pada mantra vākya piṇḍasvātma cintanarūpa
sarva cidrūpa rūpātīta niran̄jana dhyāna
caturvidhavanaridondumāḍe,
jñātr̥, jñānadoḷagaḍagi, jñāna, jñēyadoḷagaḍagi,
jñēyavu tannalli tānē viśramisi nindittayya,
nijaguru svatantrasid'dhaliṅgēśvara.