Index   ವಚನ - 148    Search  
 
ಅಂತರಂಗ ಶುದ್ಧವಿಲ್ಲದವರು, ಬಹಿರಂಗದಲ್ಲಿ ಸದಾಚಾರ ಸತ್ಕ್ರೀಯೆಯ, ಸರ್ವಜನ ಮೆಚ್ಚುವಂತೆ ಮಾಡುತಿರ್ದರೇನು? ಅದು ಲೋಕರಂಜನೆಯಲ್ಲದೆ ಶಿವ ಮೆಚ್ಚ. ಶಿವಶರಣರು ಮೆಚ್ಚರು. ಬಿತ್ತಿದ ಬೆಳೆಯನುಂಬಂತೆ, ಮಾಡಿದ ಸತ್ಕರ್ಮ ಫಲವನುಂಬ, ಕೈಕೂಲಿಕಾರಂಗೆ ಮುಕ್ತಿಯುಂಟೆ? ನಿಜಗುರು ಸ್ವತಂತ್ರಸಿದ್ಧಲೀಂಗೇಶ್ವರ.