Index   ವಚನ - 155    Search  
 
ನಿಜವನರಿದು ನಿರ್ಮಲ ಜ್ಞಾನಿಯಾದ ಕರ್ಮರಹಿತ ಶಿವಯೋಗಿ ಕರ್ಮಕಾಯನಲ್ಲ. ಕರ್ಮಭೋಗಿಯಲ್ಲ. ಕರ್ಮಾಧೀನನು ತಾ ಮುನ್ನವೆ ಅಲ್ಲ. ಅದೆಂತೆಂದಡೆ, ಪರಿಪಕ್ವವಾದ ಹಣ್ಣು ರಸ ತುಂಬಿ ತೊಟ್ಟು ಕಳೆದ ಬಳಿಕ, ಮರಳಿ ವೃಕ್ಷವನಡರಿ, ತೊಟ್ಟು ಹತ್ತುವುದೇ ಹೇಳ? ಆಗಾಮಿ ಪರಿಪಕ್ವವಾಗಿ ಸಂಚಿತವಾಯಿತ್ತು. ಸಂಚಿತ ಪರಿಪಕ್ವವಾಗಿ ಪ್ರಾರಬ್ಧವಾಯಿತ್ತು. ಪ್ರಾರಬ್ಧ ಪರಿಪಕ್ವವಾಗಲು ತ್ರಿವಿಧ ಕರ್ಮನಾಸ್ತಿಯಾಯಿತ್ತು. ಇದ್ದು ಕರ್ಮವುಂಟೆ? ಇಲ್ಲವಾಗಿ. ``ಯಥಾ ವೃಕ್ಷಫಲಂ ವೃಕ್ಷಾತ್ ಪತನಂ ಲಭತೇ ಸ್ವತಃ| ತಥಾ ಸರ್ವಾಣಿ ಕರ್ಮಾಣಿ ಪತಂತಿ ಶಿವಯೋಗಿನಾಂ" ಎಂದುದಾಗಿ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣರು ಕರ್ಮರಹಿತರು.