ಇಬ್ಬರು ಮೂವರು ದೇವರೆಂದು
ತಬ್ಬಿಬ್ಬುಗೊಂಡು ನುಡಿಯಬೇಡ.
ಒಬ್ಬನೇ ದೇವ ಕಾಣಿರಣ್ಣ.
"ಸರ್ವಸ್ಮಾದಧಿಕೋರುದ್ರಃ ಪರಮಾತ್ಮಾ ಸದಾಶಿವಃ
ಇತಿ ಯತ್ಮ ನಿಶ್ಚಿತಾ ಧೀಃ ಸವೈ ಮಾಹೇಶ್ವರಃ ಸ್ಮೃತಃ||"
ಎಂದವಾಗಮಂಗಳು.
`ಶಿವನೇಕೋ ದೇವ'ನೆಂದು ಸಾರುತ್ತಿವೆ ಶ್ರುತಿ ಪುರಾಣಂಗಳು.
ಇದು ಕಾರಣ,
ಶಿವನಲ್ಲದೆ ದೈವವಿಲ್ಲೆಂದರಿದ
ಮಾಹೇಶ್ವರನ ಹೃದಯ ನಿವಾಸವಾಗಿಪ್ಪ,
ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.