Index   ವಚನ - 169    Search  
 
ಬ್ರಹ್ಮ ವಿಷ್ಣು ಇಂದ್ರಾದಿ ದಿಕ್ಪಾಲಕರ ಪದವೆಲ್ಲ ತೃಣವತ್ತಾಯಿತ್ತು ಲಿಂಗಪದದ ಮುಂದೆ. ಯಕ್ಷ ಗಂಧರ್ವಾದಿಗಳ ಪದವೆಲ್ಲ ತೃಣವತ್ತಾಯಿತ್ತು ಲಿಂಗಪದದ ಮುಂದೆ. ಇನ್ನುಳಿದ ಪದವಂತಿರಲಿ, ರುದ್ರಪದ ಪ್ರಮಥಪದ ಘನವೆಂಬೆನೆ? ಕ್ಷಣಿಕವಾದವು ಲಿಂಗಪದದ ಮುಂದೆ. ಇದು ಕಾರಣ ಲಿಂಗಪದಕ್ಕಿಂತ ಇನ್ನಾವುದೂ ಘನವಿಲ್ಲೆಂದರಿದು ಲಿಂಗಪದದಲ್ಲಿದ್ದ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ, ನಿಮ್ಮ ಶರಣನು.