Index   ವಚನ - 172    Search  
 
ಅನಲ ಸಂಗದಿಂದ ಕಾಷ್ಠ ಅನಲವಾದಂತೆ, ಶಿವಸಂಸ್ಕಾರ ಸಂಪನ್ನನಾದ ಶಿವಭಕ್ತನು, ಶಿವನಹಲ್ಲದೆ ಮಾನವನಾಗಲರಿಯನಯ್ಯ. ಅದು ಕಾರಣ, ಶಿವಭಕ್ತಂಗೆ ಜಾತಿಯಿಲ್ಲ ಸೂತಕವಿಲ್ಲ. ಶಿವನೆಂತಿಹನಂತೆ ಇಹನು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಜಭಕ್ತನು.