Index   ವಚನ - 179    Search  
 
ಅನುಭಾವವಿಲ್ಲದ[ವನ] ಭಕ್ತಿ ಆಯುಧವಿಲ್ಲದ ವೀರನಂತೆ. ಅನುಭಾವವಿಲ್ಲದ[ವನ] ಆಚಾರ ಕಾಲಿಲ್ಲದ ಹೆಳವನಂತೆ. ಅನುಭಾವವಿಲ್ಲದವನ ವಿಚಾರ ಕಣ್ಣಿಲ್ಲದ ಕುರುಡನಂತೆ. ಅನುಭಾವವಿಲ್ಲದವನ ಯೋಗ ಬರಿಕೈಯಲ್ಲಿ ಹುಡಿಯ ಹೊಯ್ದುಕೊಂಬ ಗಜಸ್ನಾನದಂತೆ. ಭಕ್ತಿ ವಿರಕ್ತಿ ಮುಕ್ತಿಗೆ ಅನುಭಾವವೆ ಬೇಕು. ಅನುಭಾವವಿಲ್ಲದಾತಂಗೆ ಮುಕ್ತಿಯಿಲ್ಲ ಇದು ಸತ್ಯ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ಸಾಕ್ಷಿಯಾಗಿ.