Index   ವಚನ - 178    Search  
 
ಅರುಣೋದಯಕ್ಕೆ ಕತ್ತಲೆ ಹರಿದು ಬೆಳಗು ಪಸರಿಸಿದಂತೆ, ಸಮ್ಯಗ್‍ಜ್ಞಾನೋದಯವಾಗಿ, ಅಜ್ಞಾನ ಬೀಜ ಮಲಸಂಸಾರ ತೊಲಗಿ, ಪರಮಾತ್ಮ ತಾನೆಂದರಿದು, ಆ ಅರಿದರಿವು ಕರಿಗೊಂಡು, ಪರಶಿವನೊಡನೆ ಸಮರಸಭಾವಿಯಾದವನೆ ಮುಕ್ತನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.