Index   ವಚನ - 192    Search  
 
ಕಾದಬಲ್ಲೆವೆಂಬವರೆಲ್ಲ ಕಲಿವೀರಭಟರಹರೆ?. ಇರಿಯದ ವೀರತ್ವ ಮೆರೆಯಬಲ್ಲುದೆ ಹೇಳ? ನಿಜವನರಿಯದೆ ಬರಿಮಾತನಾಡುವರೆಲ್ಲ ಜ್ಞಾನಿಗಳಹರೆ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನನರಿದು, ಮಾಯೆಯ ಗೆಲಬಲ್ಲಾತನೆ ಕಲಿವೀರನು.